ರಮಾ ವೈದ್ಯನಾಥನ್ ಅವರು ದೆಹಲಿಯ ಒಬ್ಬ ಭಾರತೀಯ ಭರತನಾಟ್ಯ ಕಲಾವಿದೆ. ಇವರು ದೇಶದ ಅತ್ಯುತ್ತಮ ಭರತನಾಟ್ಯ ಸಂಸ್ಥೆಗಳಲ್ಲಿ ಒಂದಾದ ಗಣೇಶ ನಾಟ್ಯಾಲಯದ ನಿರ್ದೇಶಕರಾಗಿದ್ದರು. ಅವರು ದೇಶ ಮತ್ತು ಪ್ರಪಂಚದಾದ್ಯಂತ ಸುತ್ತಿ, ತಮ್ಮ ಕಲೆಯನ್ನು ಪ್ರದರ್ಶಿಸಿದರು. ಅವರು ಸರೋಜಾ ವೈದ್ಯನಾಥನ್ ಅವರ ಮಗ ಮತ್ತು ಹಿಟಾಚಿ ಇಂಡಿಯಾದಲ್ಲಿ ಸಿಎಕ್ಸ್‌ಓ ಆಗಿರುವ, ಸಿ.ವಿ. ಕಾಮೇಶ್ ಅವರನ್ನು ವಿವಾಹವಾದರು. ರಮಾ ವೈದ್ಯನಾಥನ್ ಅವರು ೨೦೧೩ ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮತ್ತು ೨೦೧೭ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು. == ಉಲ್ಲೇಖಗಳು ==